ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಗಳಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಣಗಾಡುತ್ತಿದ್ದಾರೆ ಕಾರಣ ಶಿಕ್ಷಣ ಸಂಸ್ಥೆಗಳ ವೆಚ್ಚಗಳು. ನಮ್ಮ ಜನ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಥೆ ಅಥವಾ ಸುಸಜ್ಜಿತ ಶಾಲೆಯಲ್ಲಿ ಕಲಿಸಿದರೆ ಮಾತ್ರ ಬುದ್ದಿ ಬರುತ್ತದೆ ಜೊತೆಗೆ ಸರಕಾರಿ ಶಾಲೆಗಳ ಮೇಲೆ ತಾತ್ಸಾರ ಮನೋಭಾವ, ಸರಕಾರಿ ಉದ್ಯೋಗದ ಮೇಲೆ ಅತಿ ಹೆಚ್ಚು ಪ್ರೀತಿ . ಯಾಕಿಷ್ಟು ಅಸಡ್ಡೆತನ ನಮ್ಮ ಜನಕ್ಕೆ.
ಇತ್ತೀಚಿಗೆ ಜನರ ಬಳಿ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಜನರ ಬಳಿ ಅತಿ ಹೆಚ್ಚು ಹಣ ಪಡೆದು ಶಿಕ್ಷಣ ಕೊಡುವುದು ಮುಂದಿನ ಸಮಾಜದ ಅಸಮತೋಲನವನ್ನು ಹುಟ್ಟು ಹಾಕುತ್ತದೆ. ಸಮಾಜದಲ್ಲಿ ಎಲ್ಲ ಆರ್ಥಿಕ ವರ್ಗದ ಜನರು ಶಿಕ್ಷಣ ಪಡೆಯುತ್ತಾರೆ ಆದರೆ ಹಣ ಇರುವವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಹಿಸುತ್ತಾರೆ ಅದು ಅವರ ಹಕ್ಕು ಇರಬಹುದಾದರೂ ಅದು ಸಮಾಜದ ಬಡವ ಶ್ರೀಮಂತರ ನಡುವಿನ ಭಿನ್ನ ಮನೋಭಾವನೆಗಳನ್ನು ಹುಟ್ಟು ಹಾಕಿದೆ. ಅದೇ ತೆರನಾಗಿ ಹಣ ಕಡಿಮೆ ಇರುವವರು ಅಥವಾ ಬಡ ಮಧ್ಯಮವರ್ಗದವರು ಸಾಲವನ್ನು ಮಾಡಿಯಾದರೂ ತಮ್ಮ ಮಕ್ಕಳಿಗೆ ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಣ ಕೊಡಿಸುವ ಆಲೋಚನೆಯಲ್ಲಿ ಇರುತ್ತಾರೆ .
ತಂದೆ ತಾಯಿಗಳು ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುವುದೇ ಇಲ್ಲ ಎಂಬ ಮೂಢನಂಬಿಕೆಯಿಂದ ಜೀವಿಸುತ್ತಾರೆ ಅದು ಸ್ವಲ್ಪ ಮಟ್ಟಿಗೆ ನಿಜವಾದರೂ ಬಹುತೇಕ ಶಾಲೆಗಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರು ಮತ್ತು ಸರಕಾರ ನೆಡೆಸುವ ಪರೀಕ್ಷೆಗಳನ್ನು ತೇರ್ಗಡೆ ಹೊಂದಿ ಆಯ್ಕೆಯಾಗಿರುತ್ತಾರೆ ಹೀಗಾಗಿ ಸರಕಾರಿ ಶಾಲೆಗಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವ ಎಲ್ಲ ವ್ಯಮಸ್ತೆ ಇರುತ್ತದೆ .
ತಂದೆತಾಯಿಗಳ ಜವಾಬ್ದಾರಿ
೧.ಮಕ್ಕಳು (ಮಗಳ ಅಥವಾ ಮಗನ) ಪ್ರತಿ ದಿನ ಶಾಲೆಗೆ ಹೋಗುತ್ತಾರೆಯೇ ನೋಡಿಕೊಳ್ಳಬೇಕು
೨. ನಿಮ್ಮ ಮಗಳ ಅಥವಾ ಮಗನ ಓದಿನ ಬಗ್ಗೆ ಕನಿಷ್ಠಪಕ್ಷ ತಿಂಗಳಲ್ಲಿ ಒಂದು ದಿನವಾದರೂ ಅವರ ಶಿಕ್ಷರನ್ನು ಕೇಳಿ ತಿಳಿದುಕೊಳ್ಳಬೇಕು
೩. ಒಂದು ವೇಳೆ ಮಕ್ಕಳು ಸರಿಯಾಗಿ ಶಿಕ್ಷಣದಲ್ಲಿ ಗಮನ ಹರಿಸದೇ ಇದ್ದಲ್ಲಿ ಪರಿಹಾರವನ್ನು ಶಿಕ್ಷಕರ ಸಹಾಯದಿಂದ ಪಡೆದುಕೊಳ್ಳಬೇಕು
೪. ನಿಮ್ಮ ಮಕ್ಕಳ ಶಿಕ್ಷಕರು ತಿಳಿಯುವ ಹಾಗೆ ಪಾಠ ಮಾಡುತ್ತಾರೆಯೇ ಅದನ್ನು ನಿಮ್ಮ ಮಕ್ಕಳ ಮೂಲಕ ತಿಳಿದುಕೊಳ್ಳಲೇ ಬೇಕು
೫, ಪ್ರತಿಯೊಂದಕ್ಕೂ ಅದರದೇ ಆದ ಪರಿಹಾರ ಇದ್ದೆ ಇರುತ್ತದೆ ಎನ್ನುವುದನ್ನು ಶಿಕ್ಷಕರು ಮನಗೊಳ್ಳಬೇಕು ಮತ್ತು ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಬೇಕು
೬. ಶಾಲೆಗೆ ಮಕ್ಕಳನ್ನು ಸೇರಿಸಿದ ನಂತರ ತಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಮೂಢನಂಬಿಕೆಯಿಂದ ಹೊರಬಂದು ಅವರ ಓದಿನ ಬೆಳವಣಿಗೆಯಲ್ಲಿ ಆಸಕ್ತಿ ತೋರಬೇಕು
ಶಿಕ್ಷಕರ ಕರ್ತವ್ಯ (ಉತ್ತಮ ಶಿಕ್ಷಕ ಒಂದು ಉತ್ತಮ ಸಮಾಜಕ್ಕೆ ಸಮಾನ )
೧.ಪ್ರತಿಯೊಂದು ವಿದ್ಯಾರ್ಥಿಗೆ ತಾವು ಮಾಡುವ ಪಾಠ ತಲುಪುತ್ತದೆಯೇ ಎಂದು ನೋಡಿಕೊಳ್ಳಬೇಕು ಆದುದರಿಂದಲೇ ಶಿಕ್ಷಕರಿಗೆ ತಿಂಗಳಿಗೆ ಸರಿಯಾಗಿ ಸಂಬಳ ತಪ್ಪದೆ ಕೊಡುತ್ತಿರುವುದು
೨. ನೀವು ಪಾಠ ಮಾಡುವ ವಿಧಾನದಲ್ಲಿ ಬದಲಾವಣೆ ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಉದಾಹರಣೆ ಮೂಲಕ ತಿಳಿಸಬೇಕು
೩. ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಿಗೆ ಸಿಗುವ ಶಿಕ್ಷಣದಂತೆ ಭಾವಿಸಬೇಕು ಅಂದಾಗ ಮಾತ್ರ ಒಬ್ಬ ಒಳ್ಳೆ ಶಿಕ್ಷಕ ಆಗಬಹುದು
೪. ರಾಜಕೀಯವಿದೆಯೆಂದು ನೆಪ ಹೇಳುತ್ತಾ ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳದ ಶಿಕ್ಷಕ ಸಮಾಜ ಘಾತುಕನೇ ಸರಿ
೫. ಇರುವ ಸೌಲಭ್ಯ ಅಥವಾ ಸುತ್ತಮುತ್ತಲಲ್ಲಿ ದೊರಕುವ ವಸ್ತುಗಳನ್ನೇ ಬಳಸಿ ವಿಭಿನ್ನವಾಗಿ ಯೋಚಿಸುವ ವಿದ್ಯಾರ್ಥಿಗಳನ್ನು ಬೆಳೆಸುವುದು ಒಬ್ಬ ಉತ್ತಮ ಶಿಕ್ಷಕನಿಂದ ಮಾತ್ರ ಸಾದ್ಯ.
೬. ಅಂತರ್ಜಾಲದಲ್ಲಿ ಸಿಗುವ ಉನ್ನತ ದೇಶ-ವಿದೇಶಗಳ ಭಿನ್ನ-ವಿಭಿನ್ನ ಪದ್ದತಿಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಒಬ್ಬ ಅತ್ಯತ್ತಮ ಶಿಕ್ಷಕನ ಲಕ್ಷಣ