ನಾವು ನೀವೆಲ್ಲ ಸಣ್ಣವರು ಇರುವಾಗ ಅಮ್ಮ ರಾತ್ರಿಯ ಊಟ ಮಾಡಿಸುವಾಗ ಚಂದ್ರನನ್ನು ಬೆರಳು ಮಾಡಿ ತೋರಿಸಿ ಬೆಳ್ಳನೆಯ ಗುಂಡು ಗುಂಡಾದ ಆಕಾಶಕಾಯಿ ಯನ್ನು ತೋರಿಸುತ್ತಿದ್ದಳು, ಅದೇ ಖುಷಿಯಲ್ಲಿ ನಾವು ನೀವೆಲ್ಲ ಅವರು ಕೊಡುತಿದ್ದ ಮಮ್ಮು (ಕೂಳು, ರೈಸ್) ತಿನ್ನುತ್ತಿದ್ದೆವು.ಆದರೆ ಅಂದಿನ ಚಿತ್ರ ಇಂದು ಕಾಣುವ ಪರಿ ಬದಲಾಗಿದೆ, ಎಲ್ಲೋ ದೂರದಲ್ಲಿ ಕಾಣುತಿದ್ದ ಆಕಾಶದ ಚಂದ್ರನನ್ನು ಹತ್ತಿರವಾಗಿಸಿಕೊಳ್ಳುತಿದ್ದೇವೆ. ಭೂಮಿಯನ್ನು ದಾಟಿ ಆಕಾಶದಲ್ಲಿ ಬೇರೊಂದು ಗ್ರಹದಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಸುಮಾರು ಶತಮಾನಗಳಿಂದ ವಿವಿಧ ವಿದ್ವಾಂಸರು, ಸಂಶೋದಕರುಗಳು ಪ್ರಯತ್ನ ಪಡುತ್ತಲೇ ಇದ್ದಾರೆ.
ಮೊಟ್ಟ ಮೊದಲ ಬಾರಿಗೆ ಅಂದರೆ ಅಕ್ಟೋಬರ್ ೪, ೧೯೫೭ ರಲ್ಲಿ ಸೋವಿಯತ್ ಯೂನಿಯನ್ “ಸ್ಪುಟ್ನಿಕ್-೧ ” ಎನ್ನುವ ಕೃತಕ ಉಪಗ್ರಹ ವನ್ನು ಭೂಮಿಯಿಂದ ಆಕಾಶಕ್ಕೆ ತೇಲಿ ಬಿಡುವ ಮುಖಾಂತರ ಅಮೇರಿಕಾದ ವಿಜ್ಞಾನಿಗಳ ತಾವೇ ಮೊದಲು ಆಕಾಶಕ್ಕೆ ಉಪಗ್ರಹವನ್ನು ತೇಲಿಬಿಡಬೇಕೆಂಬ ಕನಸಿಗೆ ರಷಿಯನ್ನರು ತಣ್ಣೀರೆರಚಿದರು.
ಸ್ಪುಟ್ನಿಕ್-೧ ಉಪಗ್ರಹ
ನಂತರದ ವರ್ಷ ಅಂದ್ರೆ ಫೆಬ್ರುವರಿ ೧, ೧೯೫೮ ರಲ್ಲಿ ಅಮೇರಿಕ ತನ್ನ ಮೊದಲ “ಎಕ್ಸ್ಪ್ಲೋರರ್” ಉಪಗ್ರಹವನ್ನು ಆಕಾಶಕ್ಕೆ ಕಳುಹಿಸಿತು.
ಎಕ್ಷಪ್ಲೋರರ್ ಉಪಗ್ರಹ
ನಮ್ಮ ಇಂಡಿಯಾದ ವಿಜ್ಞಾನಿಗಳು ಯಾರಿಗೇನು ಕಮ್ಮಿ , ಹಣದ ವಿಷಯದಲ್ಲಿ ಬಡವರು ಇದ್ರೇನಂತಿ , ಯೋಚನೆ ಮಾಡೋದ್ರಲ್ಲಿ ಆಗರ್ಭ ಶ್ರೀಮಂತರು.ಇಂಡಿಯಾ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಾಹರ್ಲಾಲ್ ನೆಹರು ಮತ್ತು ವಿಜ್ಞಾನಿ ವಿಕ್ರಂ ಸಾರಾಭಾಯಿ ತಮ್ಮ ಕನಸಿನ ” ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ ” ರಚಿಸಿಬಿಟ್ರು ೧೯೬೨ ರಲ್ಲಿ, ನಂತರ ಅದನ್ನು ಆಗಸ್ಟ್ ೧೫, ೧೯೬೯ ರಲ್ಲಿ ” ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್ (ಇಸ್ರೋ)”ನಲ್ಲಿ ವಿಲೀನಗೊಳಿಸಿದರು. ಇಸ್ರೋ ಏಪ್ರಿಲ್ ೧೯, ೧೯೭೫ ರಲ್ಲಿ ಸೊವಿತ್ ರಾಕೆಟ್ನ ಸಹಾಯದಿಂದ “ಆರ್ಯಭಟ” ಉಪಗ್ರಹ ವನ್ನು ಭೂಮಿಯಿಂದ ಆಕಾಶಕ್ಕೆ ಕಳಿಸುವ ಮುಖೆನ ” ಜಗತ್ತಿಗೆ ನಾವಿದ್ದೇವೆ” ಎಂದು ತೋರಿಸಿಕೊಟ್ಟಿತು, ಮುಂದಿನದ್ದು ನಮ್ಮ ಕಣ್ಣ ಮುಂದೆ ಇದೆ.
ಆರ್ಯಭಟ ಉಪಗ್ರಹ
ಕೇವಲ ಆಕಾಶಕ್ಕೆ ಉಪಗ್ರಹಗಳನ್ನು ಕಳುಹಿಸಿ ಸುಮ್ಮನಾಗದ ಇಂಡಿಯಾದ ವಿಜ್ಞಾನಿಗಳು , ಮೊದಲೇ ಹೇಳಿದ ಹಾಗೆ ಅಮ್ಮ ತೋರಿಸುತಿದ್ದ ಚಂದಮಾಮನ ಮೈಮೇಲೆ ಕುಳಿತುಕೊಳ್ಳುವ ಆಸೆ ಮತ್ತು ಅವನ ಮೈ ಮೇಲಿನ ಲಕ್ಷಣಗಳನ್ನು ಅಧ್ಯಯನ ಮಾಡುವ ಮಹದಾಸೆ ಹೊತ್ತರು. ಅಂದಿನ ಪ್ರದಾನಿ ಅಟಲ್ ಬಿಹಾರಿ ವಾಜ್ಪಯಿ ಅವರ ಒಪ್ಪಿಸಿದ್ದ ಇಸ್ರೋ ಅಕ್ಟೋಬರ್ ೨೨, ೨೦೦೮ ರಲ್ಲಿ ಮೊಟ್ಟ ಮೊದಲ ಬಾರಿಗೆ ಚಂದ್ರಯಾನ-೧ ಉಪಗ್ರವನ್ನು ಶ್ರೀಹರಿಕೋಟಾ ದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಚಂದ್ರನ ಕಡೆಗೆ ಕಳುಹಿಸಿ ಕೊಟ್ಟರು. ಚಂದ್ರನ ಸುತ್ತಲಿನ ಕಕ್ಷೆ ಗೆ ಕುಳಿತ ಉಪಗ್ರಹವು ಸುಮಾರು (ಚಂದ್ರನ ಹತ್ತಿರವಿರುವ ಸುತ್ತಲಿನ ಗೋಲಾಕಾರದ ಪರಿಧಿ, ಸುಮಾರು ೧೦ ತಿಂಗಳು, ೬ ದಿನಗಳವರೆಗೆ ಚಂದ್ರನ ವಾತಾವರಣದ ಬಗ್ಗೆ ನಮ್ಮ ವಿಜ್ಞಾನಿಗಳಿಗೆ ಮಾಹಿತಿ ಕಳುಹಿಸಿ ಕೊಟ್ಟಿತು).
ಚಂದ್ರಯಾನ-೧ ಉಪಗ್ರಹ
ಕೆಲವೇ ದಿನಗಳಲ್ಲಿ ಡಾ.ಮನಮೋಹನ್ ಸಿಂಗ್ ಸರಕಾರ ರಷಿಯಾದ ಸರಕಾರದ ಜೊತೆಗೆ ಮಾತುಕತೆ ನೆಡೆಸಿ ಚಂದ್ರಯಾನ-೨ ಮಿಶಿನ್ ಗೆ ಸೆಪ್ಟೆಂಬರ್ ೧೮, ೨೦೦೮ ರಂದು ಇಸ್ರೋಗೆ ಒಪ್ಪಿಗೆ ಸೂಚಿಸಿತು. ಇಂಡಿಯಾದ ವಿಜ್ಞಾನಿಗಳ ಉತ್ಸಾಹ ಹೆಚ್ಚಿತು ಅದೆಷ್ಟೆನ್ದರೆ ಈ ಬಾರಿ ಚಂದ್ರನ ಮೇಲೆ ಹೋಗಿ ಕುಳಿತುಕೊಳ್ಳುವ ತವಕ. ಅದಕ್ಕಾಗಿ ಹಗಲಿರುಳು ಕೆಲಸ ಮಾಡಿದ ವಿಜ್ಞಾನಿಗಳು, ತಂತ್ರಜ್ಞರು, ಕೆಲಸಗಾರರು, ವಿಷಯ ಪಂಡಿತರು ಸೇರಿ ಚಂದ್ರಯಾನ-೨ ಉಪಗ್ರಹವನ್ನು ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಉಡಾವಣೆ ಮಾಡಿದರು ಜುಲೈ ೨೨, ೨೦೧೯ ರಂದು, ಆದರೆ ತಾಂತ್ರಿಕ ದೋಷದಿಂದ ನಂತರದ ದಿನಗಳಲ್ಲಿ ಭೂಮಿಯ ಸಂಪರ್ಕ ಕಳೆದುಕೊಂಡಿತು.
ಚಂದ್ರಯಾನ-೨ ಉಪಗ್ರಹ
ಮತ್ತೊಂದು ಬಾರಿ ಪ್ರಯತ್ನ ಮಾಡೋಣ ಎಂದು ಹಠವಿಡಿದ ವಿಜ್ಞಾನಿಗಳು ಚಂದ್ರಯಾನ-೩ ಕ್ಕೆ ಪ್ರದಾನಿ ನರೇಂದ್ರ ಮೋದಿಯವರ ಒಪ್ಪಗೆ ಪಡೆದು ತಯಾರಿ ಮಾಡಿಕೊಂಡರು.
ಕನಸಿನ ಚಂದ್ರಮಾಮನನ್ನು ನೋಡಲು ಈ ಬಾರಿ ನಮ್ಮ ವಿಜ್ಞಾನಿಗಳು ಜುಲೈ ೧೪, ೨೦೨೩ ರಲ್ಲಿ ಭೂಮಿಯಿಂದ ಚಂದ್ರನಡೆಗೆ “ಚಂದ್ರಯಾನ-೩ ” ಉಪಗ್ರಹವನ್ನು ಶ್ರೀಹರಿಕೋಟಾ ದ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಉಡಾವಣೆ ಮಾಡಿದರು.
ಇದರ ಕೆಲಸಾವಾದಿ ಒಂದು ತಿಂಗಳು ಮತ್ತು ೧೧ ದಿನಗಳವರೆಗೆ ಚಂದ್ರನ ಮೈ ಮೇಲಿನ ವಾತಾವರಣ ಅಂದ್ರೆ ಖನಿಜಗಳನ್ನು ಪತ್ತೆ ಮಾಡುತ್ತದೆ . ಅಲ್ಲಿಗೆ ನಮ್ಮ ತಾಯಂದಿರು ಕೈ ಬೆರಳು ಮಾಡಿ ತೋರಿಸಿದ ಚಂದ್ರನನ್ನು ಆಗಸ್ಟ್ ೨೩, ೨೦೨೩ ರಂದು ಇಸ್ರೋ ದ “ವಿಕ್ರಂ ಲ್ಯಾನ್ಡರ್ ” ಚಂದ್ರನಿಗೆ ಕೈ ಕುಲಿಕಿದೆ(ಲ್ಯಾನ್ಡ್ ).
ಏಪ್ರಿಲ್ ೧೨, ೧೯೬೧ ರಂದು ರಷಿಯಾದ ಯೂರಿ ಗಾಗ್ರಿನ್ ಭೂಮಿಯ ಕಕ್ಷೆಯ ಸುತ್ತ ಮೊದಲ ಬಾರಿಗೆ ಒಂದು ಸುತ್ತಾಕಿದನು.
ಯೂರಿ ಗಾಗ್ರಿನ್
.
ನಿಲ್ ಆಮ್ಸ್ಟ್ರಾಂಗ್
ಜೂಲೈ ೨೧, ೧೯೬೯ ರಂದು ಅಮೆರಿಕವು ಮೊದಲ ಬಾರಿಗೆ ಚಂದ್ರನ ಮೇಲೆ ನಿಲ್ ಆಮ್ಸ್ಟ್ರಾಂಗ್ ನನ್ನ ಇಳಿಸಿ ಧಾಖಲೆ ನಿರ್ಮಿಸಿತು.
ಇಂಡಿಯಾ ಕೂಡ ಚಂದ್ರನ ಮೇಲೆ ಮಾನವರನ್ನ ಇಳಿಸಲು ಯೋಜೆನೆಯೊಂದನ್ನು ಈಗಾಗಲೇ ರೂಪಿಸಿ ಕಾರ್ಯ ಪ್ರಗತಿಯಲ್ಲಿದೆ.
ಮುಂದಿನ ದಿನಗಳಲ್ಲಿ ಸೂರ್ಯನ ಸುತ್ತ ಆಕಾಶದಲ್ಲಿ ಉಪಗ್ರಹ ಆದಿತ್ಯ ಎಲ್-೧ ಅನ್ನು ೨೦೨೩ ರ ಸೆಪ್ಟೆಂಬರ್ ೨ ರಂದು ಕಳುಹಿಸುವ ಎಲ್ಲ ತಯಾರಿ ಭರದಿಂದ ನೆಡೆದಿವೆ.
ಆದಿತ್ಯ ಎಲ್-೧
ಇದು ಸೂರ್ಯನ ಸುತ್ತಲಿನ ಕಕ್ಷೆಗಳಲ್ಲಿ ಗಿರ್ಕಿ ಹೊಡೆದು ಮಾಹಿತಿ ಕೊಡಲಿದೆ ಆದರೇ ಸೂರ್ಯನ ಮೇಲೆ ಇಳಿಯುವುದಿಲ್ಲ. ಇಲ್ಲಿಯವರೆಗೆ ೪೭ ವರ್ಷಗಳ ಆಗಸ ಪಯಣದ ದಾರಿಯಲ್ಲಿ ಒಟ್ಟು ೧೨೦ ಉಪಗ್ರಹಗಳು ಉಡಾವಣೆಗೊಂಡಿವೆ. ಇವೆಲ್ಲದರ ನಡುವೆ ಕಟು ಸತ್ಯ ಏನೆಂದ್ರೆ ಅಷ್ಟೊಂದು ದೂರದಲ್ಲಿವಿರುವ ಚಂದ್ರನ ವಿಕ್ರಂ ಮತ್ತು ಪ್ರಗ್ಯಾನ್ ಲ್ಯಾನ್ಡರ್ಗಳ ಸಂಪರ್ಕ ಕಲ್ಪಿಸುವುದು ಮಾತ್ರ ನಮ್ಮ ಸರ್ಕಾರೀ ಸಂಸ್ಥೆ ಬಿಎಸ್ಏನ್ಎಲ್ (BSNL) ಅನ್ನೋದೇ ಹೆಮ್ಮೆಯ ವಿಷಯ.