ನವಿಲಿನ ಜೀವನ.
ಸುಂದರವಾದ ಬಣ್ಣ ಬಣ್ಣಗಳ ರೆಕ್ಕೆಗಳನ್ನು ಹೊಂದಿರುವ ಪಕ್ಷಿ ನವಿಲು
ನಾವೆಲ್ಲ ನೋಡಿರುವ ಹಾಗೆ ಇದು ಅತ್ಯಂತ ಆಕರ್ಷಕ ಮತ್ತು ಮನಸ್ಸಿಗೆ ಮುದ ನೀಡುವ ಪಕ್ಷಿ. ನವಿಲು ಪ್ರಾದೇಶಿಕವಾಗಿ ಇಂಡಿಯಾ ಮಯನ್ಮಾರ್ ಶ್ರೀಲಂಕಾ ಮತ್ತು ಆಫ್ರಿಕಾದ ಕೆಲವೊಂದು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಸುಮಾರು ೪೦೦೦ ವರ್ಷಗಳಿಂದಲೂ ನವಿಲು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದಡೆಗೆ ಸಾಗಿಸಲ್ಪಟ್ಟಿರುತ್ತದೆ. ಅಮೆರಿಕನ್ನರು ಇದು ಮೂಲತಃ ಅಮೆರಿಕದಲ್ಲಿಯೂ ಕೂಡ ದೊರಕಿರುತ್ತದೆ ಎಂದು ಹೇಳಿಕೊಂಡಿದ್ದಾರೆ ವಿಷಯ ಅದೇನೇ ಇರಲಿ ಎಲ್ಲಿ ಕಂಡುಬಂದರೂ ಒಳ್ಳೆಯದೇ.
ಗಂಡು ಮತ್ತು ಹೆಣ್ಣು
ಪಿಕಾಕ್ (ಪೀಕಾಕ್) ಅಂದರೆ ಗಂಡು ಮತ್ತು ಪಿಹೆನ್ (Peahen) , ಪಿಕಾಕ್ ಅಥವಾ ಗಂಡು ನವಿಲು ತನ್ನ ಗರಿಗಳಲ್ಲಿ ವಿಧವಿಧವಾದ ಬಣ್ಣಗಳನ್ನು ಹೊಂದಿರುತ್ತದೆ ಮತ್ತ ಅವುಗಳ ಉದ್ದ ಸುಮಾರು ೫ ರಿಂದ ೬ ಅಡಿಗಳಾಗಿರುತ್ತವೆ. ಮುಖ್ಯವಾಗಿ ಈ ಗರಿಗಳನ್ನು ಕಮಾಲು ರೀತಿಯಲ್ಲಿ ಹರಡಿಸಿ ತಮಗಿಷ್ಟವಾದ ಹೆಣ್ಣು ನವಿಲಿಗೆ ತೋರಿಸುತ್ತವೆ. ಹೆಣ್ಣು ನವಿಲುಗಳು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಗಂಡು ನವಿಲಿನ ಗರಿಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ ಕಾರಣ ಅವುಗಳ ಅಂಕಿ ಮತ್ತು ಉದ್ದ ಹೆಣ್ಣ ನವಿಲಿಗೆ ಒಂದು ಕುರುಹನ್ನು ನೀಡುತ್ತದೆ ತನ್ನ ಸಂಗಾತಿಯ ಬಗ್ಗೆ.
ಕಣ್ಣೀರಿನಿಂದ ಜನನ !?
ತಮ್ಮ ಹಿಂದಿನ ಪೀಳಿಗೆಯ ಮುಖಾಂತರ ಬಂದಿರುವ ಸುಂದರವಾದ ಗರಿಗಳ ಬಣ್ಣವನ್ನು ತನ್ನ ಮುಂದಿನ ಪೀಳಿಗೆಗೆ ನವಿಲುಗಳು ಜೀನುಗಳ ಮುಖಾಂತರ ವರ್ಗಾವಣೆ ಮಾಡುತ್ತವೆ. ನವಿಲು ತನ್ನ ಸಂಗಾತಿ ಹೆಣ್ಣು ನವಿಲನ್ನು ಆಕರ್ಷಿಸಿ ಅದರ ಜೊತೆಗೆ ಒಳ್ಳೆಯ ಸಂಬಂಧ ಮತ್ತು ಬಾಂಧವ್ಯ ಬೆಳೆಸುತ್ತದೆ ಹೀಗೆ ಬೆಳೆದ ಸಂಬಂಧವನ್ನು ಅವು ಮುಂದುವರಿಸುತ್ತಾ ಹೆಣ್ಣು ಮತ್ತು ಗಂಡು ನವಿಲುಗಳು ಸಂಭೋಗಿಸುತ್ತವೆ ಈ ಸಂಭೋಗದಿಂದ ಹೆಣ್ಣು ನವಿಲುಗಳು ಮೊಟ್ಟೆಯನ್ನು ಹಾಕುತ್ತವೆ. ಗಮನಿಸಬೇಕಾದ ಅಂಶ ಏನೆಂದರೆ ಗಂಡು ನವಿಲುಗಳ ಸಂತಾನೋತ್ಪತ್ತಿ ಕಾಲ ಮುಗಿದ ನಂತರ ಅದರ ಗರಿಗಳು ಒಂದೊಂದಾಗಿ ಉದುರುತ್ತವೆ ನಂತರ ಕಾಲ ಕ್ರಮೇಣ ಮತ್ತೆ ಬೆಳೆಯುತ್ತವೆ. ಇಲ್ಲಿ ನಾವು ಕಾಣಬಹುದು ಕೋಳಿ ಮೊಟ್ಟೆ ಇಡುವಿಕೆಯ ಹೋಲಿಕೆಯನ್ನು ಅಲ್ಲಿಯೂ ಕೂಡ ಹುಂಜವು ಹೆಣ್ಣು ಕೋಳಿಯ ಜೊತೆಗೆ ಸಂಬಂಧ ಬೆಳೆಸಿ ಕೋಳಿ ಮೊಟ್ಟೆ ಇಡುವಂತೆ ಮಾಡುತ್ತದೆ. ನಂತರ ಹೆಣ್ಣು ನವಿಲುಗಳು ಮೊಟ್ಟೆಗಳನ್ನು ಮರಿಗಳನ್ನಾಗಿ ಮಾಡುತ್ತವೆ 1.
ಮೂಡನಂಬಿಕೆಗಳು !
ನವಿಲು ಒಂದು ಅದ್ಭುತ ಮತ್ತು ಆಕರ್ಷಿತ ಪಕ್ಷಿ ಅದರಲ್ಲಿ ಯಾವುದೇ ತರಹದ ಸಂದೇಹ ಇಲ್ಲ ಅವು ಕೂಡ ಮನುಷ್ಯನ ಜೊತೆಯೂ ಮನುಷ್ಯನಂತೆಯೇ ಅವಿನಾ ಬಾವ ಸಂಬಂಧಗಳಿಗೆ ಹೊಂದಿಕೊಂಡಿರುತ್ತವೆ. ಕೆಲವು ಜನರು ಹೇಳುವ ಪ್ರಕಾರ ಅವುಗಳು ಕ್ರಿಶ್ಚಿಯನ್ ಜೀಸಸ್ ನ ಅನುಯಾಯಿಗಳಂತೆ ಮಾದರಿಯಾಗಿವೆ ಬೈಬಲ್ ನಲ್ಲಿ ಮಾಹಿತಿ ಇಲ್ಲವಾದರೂ ಕೂಡ ಅಂತರ್ಜಾಲದಲ್ಲಿ ಸಾಕಷ್ಟು ಪತ್ರಿಕೆಗಳು ವರದಿ ಮಾಡಿವೆ 2. ಒಂದು ವೇಳೆ ಹೆಣ್ಣು ಸಂಗಾತಿ ಅಥವಾ ಗಂಡು ಸಂಗಾತಿ ಮರಣ ಹೊಂದಿದ ನಂತರ ಬೇರೆಯ ಸಂಗಾತಿಯ ಜೊತೆಗೆ ಸಂಬಂಧವನ್ನು ಬೆಳೆಸುವುದಿಲ್ಲ ಎಂಬ ತಪ್ಪು ಮಾಹಿತಿ ಬಹಳಷ್ಟು ಜನರ ತಲೆಯಲ್ಲಿ ಓಡಾಡುತ್ತಿದೆ ಆದರೆ ಅವು ಕೂಡ ಬದಲಾದ ಸನ್ನಿವೇಶಗಳಲ್ಲಿ ತಮ್ಮ ಸಂಗಾತಿಗಳನ್ನು ಪುನರಾಯ್ಕೆ ಮಾಡಿಕೊಳ್ಳುತ್ತವೆ ಅಥವಾ ಬೇರೆ ಸಂಗಾತಿಗಳ ಜೊತೆಗೆ ಸಂಬಂಧವನ್ನು ಕೂಡ ಬೆಳೆಸುತ್ತವೆ 3. ಇತ್ತೀಚಿಗೆ ನವಿಲುಗಳು ಕಣ್ಣೀರಿನಿಂದ ಜನನ ಹೊಂದುತ್ತವೆ ಎಂಬುದನ್ನ ಚರ್ಚೆಗೀಡು ಮಾಡಲು ಪ್ರಯತ್ನಗಳು ನಡೆದಿದೆ 4 ಆದರೆ ವಿಜ್ಞಾನ ನಮ್ಮ ಕಣ್ಣ ಮುಂದೆ ಎಲ್ಲವನ್ನು ಬಯಲು ಮಾಡುತ್ತದೆ.