ಕೊನೆಗೂ ಸಿಕ್ಕಿತೇ ಉನ್ನತ ವಾಹಕ !?

ನಾವು ನೀವೆಲ್ಲ ವಿದ್ಯುತ್ತ್ ತಂತಿ ಅಂದ್ರೆ ಕಾಪರ್ (Cu),ಅಲ್ಯೂಮಿನಿಯಂ(Al), ಸಿಲ್ವರ್(Ag), ಹೀಗೆ ಮುಂತಾದ ಲೋಹ ಗಳನ್ನೂ ಹೆಸರಿಸಿ ಬಿಡುತ್ತೇವೆ, ಇವುಗಳನ್ನು ನಾವೆಲ್ಲ ನಮ್ಮ ಪ್ರೌಢ ತರಗತಿಗಳಲ್ಲಿ ವಿಜ್ಞಾನ ಪಾಠಗಳನ್ನು ಹೇಳಿಕೊಡುವಾಗ ಮೇಷ್ಟ್ರುಗಳು ಕಲಿಸಿರುತ್ತಾರೆ ಮತ್ತು ದಿನ ನಿತ್ಯದ ಕಾರ್ಯ ಚಟುವಟಿಕೆಗಳ್ಲಲಿ ಮೇಲೆ ಹೆಸರಿಸಿದ ಲೋಹಗಳನ್ನು ಕರೆಂಟ್ ವೈರ್ ಗಳಲ್ಲಿ ನೋಡಿರುತ್ತೇವೆ.
ಆದರೆ ಇಡೀ ಪ್ರಪಂಚದ ವೈಜ್ಞಾನಿಕ ಲೋಕದ ಪಂಡಿತರೆಲ್ಲ ಹೊಸ ಲೋಹದ ಆವಿಸ್ಕಾರ ಮಾಡುತ್ತಿರುತ್ತಾರೆ . ಅಯ್ಯೋ , ಅದೇಕೆ ಇರುವ ಲೋಹಗಳನ್ನೇ ಬಳಸಬಹುದಲ್ಲವೇ ? ಮತ್ತೇಕೆ ಹೊಸ ಆವಿಸ್ಕಾರ ? ಹೀಗೆ ಪ್ರಶ್ನೆ ನಮ್ಮ ತಲೆಯಲ್ಲಿ ಮೂಡುವುದು ಸಹಜ. ಜಗತ್ತಿಗೆ ಅತೀ ಅವಶ್ಯವಾಗಿ ಬೇಕಾಗಿರುವ ಯಾವುದೇ ತಡೆಗಳಿಲ್ಲದೆ (ರೆಸಿಸ್ಟನ್ಸ) ನಾವು ಬದುಕುವ ರೂಮಿನ ತಾಪಮಾನದಲ್ಲಿ (ರೂಮ್ ಟೆಂಪರೇಚರ್ ) ವಿದ್ಯುತ್ತನ್ನು ಪ್ರಸರಿಸಬಲ್ಲ ವಾಹಕ (ಸೂಪೇರ್ಕಂಡಕ್ಟರ್)ದ ಹುಡುಕಾಟದಲ್ಲಿದೆ. ಈಗಿರುವ ಕಾಪರ್, ಸಿಲ್ವರ್, ಅಲ್ಯೂಮಿನಿಯಂ ತಂತಿಗಳು (ವೈರ್) ಮತ್ತು ಮುಂತಾದ ವಾಹಕಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಿದ್ಯುತ್ ಪಾಸ್ ಮಾಡುವಾಗ ಸ್ವಲ್ಪ ವಿದ್ಯುತ್ ನಷ್ಟವಾಗುತ್ತದೆ. ಉದಾ: ಕೊಪ್ಪಳದ ಮುನಿರಾಬಾದ್ನಲ್ಲಿ ಹೈಡ್ರೊ ಪವರ್ ಪ್ಲಾಂಟ್ ನಲ್ಲಿ ತಯಾರಾಗುವ ೧೦೦ ಯೂನಿಟ್ ವಿದ್ಯುತ್ತನ್ನು ರಾಯಚೂರ್ ಗೆ ಪ್ರಸಾರ ಮಾಡುವಾಗ ಮಾರ್ಗ ಮದ್ಯೆ ನಷ್ಟವಾಗಿ ಕೊನೆಗೆ ರಾಯಚೂರ್ ತಲುಪುವಷ್ಟರಲ್ಲಿ ೯೦ ಯೂನಿಟ್ ಆಗಿರುತ್ತದೆ ಕಾರಣ ಪ್ರಸಾರ ಮಾಡುವಾಗ ಬಳಸುವ ತಂತಿ ಸ್ವಲ್ಪ ವಿರೋಧ ಒಡ್ಡುತ್ತವೆ, ಆದ್ದರಿಂದಲೇ, ಆಗುವ ನಷ್ಟವನ್ನು ತಪ್ಪಿಸಲೆಂದೇ ದಶಕಗಳಿಂದ ವಿಶ್ವದ ವಿವಿಧ ಬಾಗಗಳಲ್ಲಿ ಸೂಪರ್ಕಂಡಕ್ಟರ್ ಕಂಡು ಹಿಡಿಯುವ ಸಂಶೋದನೆಯಲ್ಲಿ ತೊಡಗಿದ್ದಾರೆ. Hyun-Tak Kim et al. (2023)
ಒಂದು ವೇಳೆ ಈಗ ಬಳಸುವ ಉನ್ನತ ವಾಹಕಗಳನ್ನಾಗಿ ಪರಿವರ್ತಿಸಲು ವಿದ್ಯುತ್ ಪ್ರಸರಿಸುವ ತಂತಿಯ ತಾಪಮಾನ ಕಡಿತಗೊಳಿಸಬೇಕು ಉದಾಹರಣೆ ಕಾಪರ್ ವೈರ್ ನ್ನು ನೀರು ಐಸ್ ಆಗುವ ತಾಪಮಾನ ( ೦ ಡಿಗ್ರಿ ಸೆಲ್ಸಿಯಸ್ ) ನಲ್ಲಿ ಬಳಸಿದರೆ ಅದು ಯಾವುದೇ ವಿದ್ಯುತ್ ನಷ್ಟ ಮಾಡದೇ ಸಂಪೂರ್ಣ ವಿದ್ಯುತ್ತನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಸಾರ ಮಾಡುವ ಉನ್ನತ ವಾಹಕವಾಗಿ ಕೆಲಸ ಮಾಡುತ್ತದೆ. ಆದರೆ ಅಷ್ಟು ಕಡಿಮೆಯ ತಾಪಮಾನ ವಿದ್ಯುತ್ ಪ್ರಸಾರವಾಗುವ ಎಲ್ಲ ಕಡೆ ಹೊಂದುವುದು ಅಸಾಧ್ಯದ ಮಾತು. ಆದ್ದರಿಂದ , ಇಲ್ಲಿಯವರೆಗೆ ತಲೆನೋವಾಗಿದ್ದ ನಾವಿರುವ ವಾತಾವರಣಕ್ಕೆ ಹೊಂದಿಕೊಳ್ಳುವ ಉನ್ನತ ವಾಹಕದ ಹುಡುಕಾಟಕ್ಕೆ ಪ್ರಯತ್ನದ ಫಲ ನೀಡಿದಂತಿದೆ.
ಈ ಹಿಂದೆ ೨೦೧೮ ರಲ್ಲಿ ಬೆಂಗಳೂರಿನ ಇಂಡಿಯನ್ ವಿಜ್ಞಾನ ಕೇಂದ್ರ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ನಲ್ಲಿನ ಅಂಶು ಪಾಂಡೆ ಮತ್ತವರ ತಂಡದ ವಿಜ್ಞಾನಿಗಳು ಪ್ರಯತ್ನ ಪಟ್ಟಿದ್ದರು. ಮುಂದುವರೆದು ಅಮೆರಿಕದಲ್ಲಿನ ರೋಚೆಸ್ಟರ್ ವಿಶ್ವವಿದ್ಯಾಲಯದ ವಿಜ್ಞಾನಿ ರಂಗ ಪಿ. ಡೈಸ್ ತಂಡ ತಾಪಮಾನ ೨೧ ಡಿಗ್ರಿ ಸೆಲ್ಷಿಯಸ್ ನಲ್ಲಿ ಮತ್ತು ಬೂಮಿಯ ಮೇಲಿನ ಒತ್ತಡಕ್ಕಿಂತ ೧೦,೦೦೦ ಪಟ್ಟು ಜಾಸ್ತಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಉನ್ನತ ವಾಹಕ(ಸೂಪರ್ ಕಂಡಕ್ಟರ್) ನ್ನು ಕಂಡುಹಿಡಿದ್ದಿರು ಆದರೆ ಪ್ರಾಯೋಗಿಕವಾಗಿ ಉಪಯೋಗದ ತೊಂದರೆಗಳು ಕಂಡು ಬಂಡ ಬಂದವು.
ಇದೀಗ ದಕ್ಸಿಣ ಕೊರಿಯಾದ ವಿಶ್ವವಿದ್ಯಾಲಯವೊಂದರ ಹುಂ-ಟಕ್ ಕಿಮ್ ತಂಡ ನಾವು ಬದುಕುವ ತಾಪಮಾನಕ್ಕೆ ಅಮ್ತ್ತು ಒತ್ತಡಕ್ಕೆ ಅನುಗುಣವಾಗಿ ಕೆಲಸಮಡುವ ಕಾಪರ್ (Cu) ಮತ್ತು ಲೆಡ್ (Pb ) ಮಿಶ್ರಣ (LK-99) ತಯಾರು ಮಾಡಿದೆ, ಆ ಮಿಶ್ರಣವು ಉನ್ನತ ವಾಹಕವಾಗಿ ಕೆಲಸ ಮಾಡುತ್ತದೆ ಎಂದು ಅದು ವೈಜ್ಞಾನ ಲೇಖನವೊಂದನ್ನು ಅಂತರ್ಜಾಲ ತಾಣವೊಂದಕ್ಕೆ ಪ್ರಸ್ತುತ ಪಡಿಸಿದೆ. ಇದು ಜಗತ್ತಿನ ವೈಜ್ಞಾನಿಕ ಲೋಕದಲ್ಲಿ ಹೊಸದೊಂದು ದಾಖಲೆ ಸೃಷ್ಟಿಸುವ ಮುನ್ಸೂಚನೆ ಕೊಟ್ಟಿದೆ. ಒಂದು ವೇಳೆ ವೈಜ್ಞಾನಿಕ ಲೋಕದ ವಿಜ್ಞಾನ ಪಂಡಿತರು ಒಪ್ಪಿ ಅದನ್ನು ಪ್ರಯೋಕವಾಗಿ ಜನರ ಬಳಕೆಗೆ ತಂದರೆ ಖಂಡಿತವಾಗಿ ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ಲೋಕದಲ್ಲಿ ಬಹುದೊಡ್ಡ ಬದಲಾವಣೆ ನೋಡಬಹುದು.

Leave a Reply

Your email address will not be published. Required fields are marked *

Skip to toolbar