ಸೂರ್ಯನ ಜನನವಾಗಿ ಅಂದಾಜು 4.5 ಬಿ ಲಿಯನ್ ವರ್ಷಗಳೇ ಕಳೆದಿವೆ ಇನ್ನೂ 5 ಬಿಲಿಯನ್ ಸೂರ್ಯ ಸೌರ ಮಂಡಲಕ್ಕೆ ಬೆಳಕು ಕೊಡುವನು, ಅವನಲ್ಲಿರುವ ಶಕ್ತಿ ಹೀಲಿಯಂ ಮತ್ತು ಹೈಡ್ರೊಜನ್(ಜಲಜನಕ) ನಿಂದ ಕೂಡಿದ ನ್ಯೂಕ್ಲಿಯರ್ ಫಿಷನ್ ನಿಂದಾಗಿ ಬೆಳಕು ಅಥವಾ ಶಾಖ ಹೊರಬರುತ್ತದೆ. ಮುಂದೊಂದು ದಿನ ಸೂರ್ಯನ ಒಳಗಿರುವ ಹೈಡ್ರೊಜನ್ ಖಾಲಿ ಆಗೇ ಆಗುತ್ತದೆ
ಹಾಗಾದರೆ ಒಂದು ವೇಳೆ 5 ಬಿಲಿಯನ್ ವರ್ಷಗಳ ಬದಲು ಮುಂದಿನ 5ದೇ ದಿನದಲ್ಲಿ ಸಾಯುವಂಥಾದರೆ ಏನು ಗತಿ !?
1. ಮೊದಲನೇ ದಿನ ಸುಮಾರು ಶೇ.10 ರಷ್ಟು ಬೆಳಕು ಹೆಚ್ಚಾಗುತ್ತದೆ
ಇದು ಕೇವಲ ಬೆಳಕಾಗಿರುವುದಿಲ್ಲ ಬದಲಾಗಿ ಉಷ್ಣದಿಂದ ಕೂಡಿದ ಬೆಳಕಾಗಿರುತ್ತದೆ ಹೀಗಾಗಿ ಸಮುದ್ರದಲ್ಲಿನ ನೀರು ಆವಿಯಾಗಲು ಆರಂಬವಾಗುತ್ತದೆ ಜೊತೆಗೆ ಇಂದಿನ ವೀನಸ್ ಗ್ರಹದಂತೆ ಭೂಮಿಯು ಕಾದ ಹಂಚಿನಂತಾಗುತ್ತದೆ
2. ಭೂಮಿಯ ಮೇಲಿನ ಮರಗಿಡಗಳು ಬಿಸಿಲಿನ ತಾಪಕ್ಕೆ ಕರಿದ ಚಕ್ಕುಲಿಯಂತಾಗುತ್ತವೆ
3. ಸಸ್ಯ ಆದಾರಿತ ಪ್ರಾಣಿಗಳು ಹಸಿವಿನಿಂದ ಸಾಯುವಂತಗುತವೆ
4. ಸಸ್ಯಾಹಾರಿ ಮನುಷ್ಯ ಮಾಂಸಾಹಾರಿಯಾಗಬಹುದು
5. 3ನೇ ದಿನದಲ್ಲಿ 40% ಹೆಚ್ಚಳ ಉಷ್ಣದಿಂದಾಗಿ ಸಮುದ್ರದಲ್ಲಿ ಜಲಚರಗಳು ಕುಡಿಯಲಾರಂಬಿಸಿ ಕುದಿಯಲಾರಂಬಿಸಿ ಮನುಷ್ಯ ಉಪ್ಪು ಉಪ್ಪು ಮಾಂಸ ಸೇವಿಸಬೇಕಾಗಬಹುದು
6. ಕೊನೆಯ ದಿನ ಅಂದರೆ 5ನೇ ದಿನ ಸೂರ್ಯನಲ್ಲಿರುವ ಜಲಜನಕ ಖಾಲಿಯಾಗಿ ಸೂರ್ಯನ ಮೈ ಯಲ್ಲಿರುವ ಹೀಲಿಯಂ ಅಸ್ಥಿರ ಗೊಳ್ಳುತ್ತದೆ
7. ಕೊನೆಯದಾಗಿ ಅಸ್ಥಿರ ಹೀಲಿಯಂ ನಿಂದಾಗಿ ಸೂರ್ಯ ಸ್ಪೋಟವಾಗುತ್ತಾನೆ ಘೋರ ಬೆಳಕು ಆವರಿಸುತ್ತದೆ ಸೌರಮಂಡಲದಲ್ಲಿ ಭೂಮಿ ಇಲ್ಲವಾಗುತ್ತದೆ
ಸಾರಾಂಶ: ಮುಂದೊಂದು ದಿನ 5 ಬಿಲಿಯನ್ ವರ್ಷದ ನಂತರ ಸೂರ್ಯ ಸಾಯುತ್ತಾನೆ ಸ್ಪೋಟದಿಂದಾಗಿ ಸುಮಾರು ಸೂರ್ಯಗಳಾಗಬಹುದು ಆದರೂ ಈಗಿನ ಸೂರ್ಯನ ಶೇ 10ರಷ್ಟು ದೊಡ್ಡದಾಗಿರುತ್ತವೆ ಅದೃಷ್ಟವಶಾತ್ ಮನುಷ್ಯ ಇದಕ್ಕೆ ಸಾಕ್ಷಿಯಾಗಲು ಬದುಕಿರುವುದಿಲ್ಲ.