ನಮ್ಮ ಜನರಿಗೆ ಮಣ್ಣಿನ ಮಗ ರೈತ ಎಂದು ಕೇಳಿಸಿಕೊಂಡ ಅಭ್ಯಾಸ ಆದ್ರೆ ಮುಂದುವರೆದು ರೈತ ಮಣ್ಣಿನ ಬಗ್ಗೆ ತಿಳಿದಿರುವ ಒಬ್ಬ ಮಣ್ಣಿನ ವಿಜ್ಞಾನ ಸಂಶೋಧಕ ಎನ್ನುವುದನ್ನೇ ಮರೆತಿದ್ದಾರೆ. ಹೌದು , ನಾವು ನೀವೆಲ್ಲ ರೈತನನ್ನು ಕೇವಲ ಬೆಳೆಗಳನ್ನು ಬೆಳೆದು ಅಂಗಡಿಗೆ ತಂದು ಮಾರುವ ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ಕೂಲಿ ಕಾರ್ಮಿಕ ಎಂದುಕೊಂಡಿದ್ದೇವೆ ಆದರೆ ನಿಜಾಂಶವೇ ಬೇರೆ. !
ಮಳೆಗಾಲ ಬಂತೆಂದರೆ ನಗರ ಪ್ರದೇಶದಲ್ಲಿನ ಬಹುತೇಕ ಜನಕ್ಕೆ ಮಳೆ ಕಿರಿ ಕಿರಿ ಯಾದರೆ ಇನ್ನು ಕೆಲವರಿಗೆ ಮಳೆಗಾಲ ಎಂದರೆ ಶನಿಗಾಲ ಎಂದೇ ಉಚ್ಚರಿಸುತ್ತಾರೆ ಕಾರಣ ಮಾಲ್ಗಳಿಗೆ ಬೈಕ್ನಲ್ಲಿ ಹೋಗಲು ತೊಂದರೆ, ರಸ್ತೆಯಲ್ಲಿ ಗುಂಡಿಗಳಲ್ಲಿ ನೀರು ತುಂಬಿ ಅಪಾಯವಾಗುವ ಸಂದರ್ಭಗಳು ಹೀಗೆ ನೂರಾರು ತೊಂದರೆಗಳ ಸುರಿಮಳೆ ಆದರೆ ಹಳ್ಳಿಯಲ್ಲಿ ಇರುವ ರೈತಾಪಿ ಜನಕ್ಕೆ ಮಳೆಗಾಲ ಅಂದ್ರೆ ಸಂಭ್ರಮ ಸಡಗರ. ಕೆರೆ ಬಾವಿಗಳು ತುಂಬಿ ದನಕರುಗಳಿಗೆ ನೀರಿನ ಅಭಾವ ನೀಗುವುದು ಒಂದೆಡೆಯಾದರೆ ತಾನು ಬೆಳೆಬೆಳೆಯುವ ಭೂಮಿಗೆ ನೀರುಣಿಸಿದ ಕೆಲಸವೂ ಇನ್ನೊಂದೆಡೆ. ಮಳೆಯಿಂದ ಹಸಿಯಾದ ಭೂಮಿಯನ್ನ ಇನ್ನು ಹಸನಾಗಿ ಬೆಳೆ ಬೆಳೆಯಲು ಆರಂಭ ಮಾಡುತ್ತಾನೆ ಇದು ನಮ್ಮ ನಮ್ಮೆಲ್ಲರಿಗೂ ತಿಳಿದಿರುವ ಸಂಗತಿ.
ರೈತ ಎಲ್ಲಾ ತರಹದ ಮಣ್ಣುಗಳಲ್ಲಿ ಒಂದೇ ತೆರನಾದ ಬೆಳೆ ಬೇಲಿಯುವುದಿಲ್ಲ , ರೈತನು ತನ್ನ ಭೂಮಿಯ ಮಣ್ಣಿಗೆ ಹೊಂದಿಕೊಳ್ಳುವ ಬೆಳೆಯನ್ನು ಮತ್ತು ಸರಿಯಾಗಿ ಪೈರು ಬರುವ ಬೆಳೆಯನ್ನು ಬೆಳೆಯುತ್ತಾನೆ. ಹೀಗಾದಾಗ ರೈತನಿಗೆ ತನ್ನ ಭೂಮಿಯ ಮಣ್ಣಿನ ಸಾರಾಂಶದ ಬಗ್ಗೆ ಒಂದು ಕನಿಷ್ಠ ಜ್ಞಾನವಿರುತ್ತದೆ ಅದೇ ಆಧಾರದ ಮೇಲೆ ಅವನು ಬೆಳೆ ಬೆಳೆಯುತ್ತಾನೆ. ಬೆಳೆ ಬೆಳೆದ ನಂತರ ಸರಿಯಾದ ಸಮಯಕ್ಕೆ ಅದಕ್ಕೆ ನೀಡಬೇಕಾದ ನೀರು, ಪೋಷಕಾಂಶಗಳನ್ನ ಕೊಡುತ್ತಾನೆ ಅಂದಮೇಲೆ ಅವನಿಗೆ ತನ್ನ ವ್ಯವಸಾಯಕ್ಕೆ ಒಂದು ಪದ್ಧತಿ ಅಳವಡಿಸಿರುತ್ತಾನೆ. ನಂತರ ಮುಂದಿನ ಬೆಳೆಗೆ ಅವನು ಅದೇ ಮಣ್ಣಿನಲ್ಲಿ ಬೆಳೆ ಬದಲಾಯಿಸುವುದರ ಮುಖಾಂತರ, ಹೀಗೆ ಮಣ್ಣನ್ನು , ಬೆಳೆಗಳ ಇಳುವರಿಯನ್ನು ಪರೀಕ್ಷಿಸುವ (analysis) ಪ್ರಯೋಗಗಳನ್ನು ಮಾಡುತ್ತ ತನ್ನ ಮಣ್ಣನ್ನು ಅಧ್ಯಯನ ಮಾಡುತ್ತಾನೆ ಇದು ಕಾಲಕಾಲಕ್ಕೂ ನೆಡೆದು ಬದಲಾಗುತ್ತ ಬಂದಿರುವ ವಿಜ್ಞಾನ.
ಹೀಗೆ ರೈತ ತನ್ನ ಮಣ್ಣಿನ ಪೋಷಕಾಂಶಗಳ ಬಗ್ಗೆ ಅಧ್ಯಯನ ಮಾಡುತ್ತಲೇ ಮಣ್ಣಿನ ವಿಜ್ಞಾನವನ್ನ (soil science ) ಕಲಿತಿರುತ್ತಾನೆ , ಇದುವೇ ರೈತ ರೂಢಿಸಿಕೊಂಡಿರುವ ಸಂಶೋಧನೆ . ರೈತ ಬೆಳೆದ ಬೆಳೆ ವಿಜ್ಞಾನದ ಮುಖಾಂತರ ನಮ್ಮ ಹೊಟ್ಟೆ ಸೇರುತ್ತದೆ ಎಂಬುದಕ್ಕೆ ಸಾಕ್ಷಿ. ವಿಜ್ಞಾನ ಎಂದರೆ ಪದವಿ ಅಲ್ಲ ವಿಜ್ಞಾನ ಅಂದರೆ ತಿಳುವಳಿಕೆ ಎಂದರ್ಥ.
ಇದು ನಮ್ಮ ಶಾಲೆಯ ಕಲಿಕೆ