ಹಾವು ಎಂಬುದು ಸರಿಸೃಪ (ತೆವಳಿಕೊಂಡು ನಡೆಯುವುದು) ಆಗಿರುವುದರಿಂದ ಅವುಗಳಿಗೆ ತಮ್ಮದೇ ಆದಂತಹ ಆಹಾರ ಜೀರ್ಣ ಶಕ್ತಿ ಇರುತ್ತದೆ. ಮನುಷ್ಯ ಹಸಿ ಮಾಂಸವನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆ, ಮಾನವ ನಾಗರೀಕತೆ ಬೆಳೆದಂತೆ ಬೆಂಕಿ ಕಂಡುಕೊಂಡು ತಿನ್ನುವ ಆಹಾರವನ್ನು ಬೇಯಿಸಿ ತಿನ್ನಲು ಆರಂಬಿಸಿದ ಆದರೇ ಅದಕ್ಕಿಂತಲೂ ಮೊದಲು ಹುಲು ಮಾನವರು ಬೇಟೆಯಾಡಿದ ಪ್ರಾಣಿಗಳನ್ನು, ಗಡ್ಡೆ ಗೆಣಸು ತರಕಾರಿಗಳನ್ನು ಹಾಗೆಯೇ ಹಸಿ ಹಸಿಯಾಗಿ ತಿನ್ನುತ್ತಿದ್ದರು ಕಾರಣ ಅವನಿಗೆ ಜೀರ್ಣಿಸಿ ಕೊಳ್ಳುವ ಶಕ್ತಿ ಪ್ರಭಾವ, ಅದೇ ತರಹ ಬೇರೆ ಬೇರೆ ಪ್ರಾಣಿಗಳಿಗೆ ವಿವಿಧ ಬಗೆಯ ಜೀರ್ಣ ಶಕ್ತಿ ಇರುತ್ತದೆ.
ಅಂದಹಾಗೆ, ನಮ್ಮ ಜನ ಹಾವಿಗೆ ಹಾಲು ಕುಡಿಸಬೇಕು, ಹಾಲಿನ ಬಟ್ಟಲು ಮುಂದಿಡಬೇಕು., ವಿಧವಿಧ ವಾಗಿ ಮಾಹಿತಿಯನ್ನು ಹೇಳುತ್ತಿದ್ದಾರೆ, ಆದರೇ ಪ್ರಯೋಗಗಳು ನಡೆದಿರುವ ಹಾಗೆ, ವಿಜ್ಞಾನಿಗಳು ಪ್ರಯೋಗದಲ್ಲಿ ಹಾವನ್ನು ಹಸಿವಾಗುವ ತನಕ ಕಾದು ನಂತರ ಹಾಲು ಕೊಟ್ಟಾಗ ಕುಡಿಯದೇ ನೀರನ್ನು ಕುಡಿದಿರುತ್ತವೆ. ನಮ್ಮ ಮುಂದಿರುವ ಪಲಿತಾಂಶಗಳು ಹೇಳುವುದು ಏನೆಂದರೆ “ಹಾವಿಗೆ ಹಾಲಿನ ಪ್ರೊಟೀನ್ ಅಂಶ” ವನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ ಒಂದುವೇಳೆ ಕುಡಿಸಿದರೆ ಹಾವು ಹೊಟ್ಟೆಯಲ್ಲಿ ತೊಂದರೆಯಾಗಿ ಸಾಯುವ ಸಂಭವ ಅತೀ ಹೆಚ್ಚು ಇರುತ್ತದೆ.
ವಿಜ್ಞಾನ ಅಂದರೆ ತಿಳುವಳಿಕೆ
ಇದು ನಮ್ಮ ಶಾಲೆ ಕಲಿಕೆ