ನಮ್ಮ ಭೂಮಿ ಹಸಿರು ಇತ್ತು , ಸಿಮೆಂಟು ಪ್ಲಾಸ್ಟಿಕ್ನಿಂದ ದಿನಬೆಳಗಾದರೆ ತುಂಬಿಸುತಿದ್ದೇವೆ ಹೀಗಿರುವಾಗ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ತಲೆಯಲ್ಲಿ ಇಳಿಸಿಕೊಂಡವರೇ ನಿಜವಾದ ಸಾಧಕರೇ ? ಅಥವಾ ದೇಹ ಮುಚ್ಚಿಕೊಳ್ಳಲು ಬೇಕಾಗುವ ಬಟ್ಟೆಯನ್ನು ಡೈಮಂಡು ಗಳಿಂದ ಸಿಂಗರಿಸಿಕೊಂಡವರೇ ನಿಜವಾದ ಸಾಧಕರೇ ? ಅಥವಾ ಬಿಡಿಗಾಸಾದ್ರೂ ಪರವಾಗಿಲ್ಲ ಕಸ ಕಡ್ಡಿಗಳನ್ನು ಸ್ವಚ್ಛ ಮಾಡಿ ಉಳಿದವರಿಗೆ ಜೀವಿಸಲು ಅನುಕೂಲ ಮಾಡುವವರೆ ನಿಜವಾದ ಸಾಧಕರೇ ?
ಹಾಗಾದರೆ ಬೂಮಿಯ ಮೇಲೆ ಸರಳವಾಗಿ , ಪ್ರಾಮಾಣಿಕವಾಗಿ ಕಾಯಕ ಮಾಡಿ ಪರಿಸರ ನಾಶ ಮಾಡದೇ ಪರಿಸರ ಸಂರಕ್ಷಣೆಯಲ್ಲಿ ತೊಡಗಿದವರಲ್ಲಿ ಯಾರು ? ವಿಜಾನಿಗಳೇ ? ತಂತ್ರಜ್ಞಾನಿಗಳೇ ? ಶ್ರೀಮಂತರೇ ? ಸ್ವಚ್ಛ ಮಾಡುತ್ತಿರುವ ಕರ್ಮಚಾರಿಗಳೇ ?
೨೦೨೪ ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಹೋರಾಟಗಾರು ಮತ್ತು ಬಹುಜನ ಸಮಾಜ ಪಕ್ಷದ ಸದಸ್ಯರು ಆದ ಡಾ. ಸಿ. ಎಸ್ ದ್ವಾರಕಾನಾಥ್ ರವರು ” ಮಲ ಹೊರುವ ಕರ್ಮಚಾರಿಗಳು ಇಬ್ಬರಿಗೆ ಆಯ್ಕೆ ಮಾಡಬೇಕು ” ಎಂದರು , ಅದಕ್ಕೆ ಪ್ರತಿಯಾಗಿ ಹಿರಿಯ ಪರಿಸವಾದಿ ಮತ್ತು ಅಂಕಣಕಾರರೂ ಆದ ನಾಗೇಶ್ ಹೆಗಡೆಯವರು “ಯಾವ ಮಾನದಂಡ ದ ಮೇಲೆ ಕೊಡಬೇಕು” ಅಂತ ಕೇಳಿದ ಪ್ರಶ್ನೆ. ಸಾಮಾಜಿಕ ಜಾಲತಾಣದಲ್ಲಿ ಇದು ಬಹಳ ಚರ್ಚಿತ ವಿಷವಾಗಿದೆ .